ಖಾಸಗಿ ಬಸ್ ಮಾಲಕರ ಸಂಘದಿಂದ ಬಂದ್ ಬೆಂಬಲ ಇಲ್ಲ

ಕರಾವಳಿ ಮಂಗಳೂರು
Spread the love

ಮಂಗಳೂರು(7ಜನವರಿ/2020): ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿರುವ ಭಾರತ ಬಂದ್ ಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಬಸ್ ಮಾಲಕರ ಸಂಘದಿಂದ ಯಾವುದೇ ಬೆಂಬಲ ಇಲ್ಲ.
ನಾಳೆಯ ಮುಷ್ಕರಕ್ಕೆ ಆರು ಬ್ಯಾಂಕ್ ಯೂನಿಯನ್ ಗಳು ಬೆಂಬಲ ನೀಡಿರುವ ಕಾರಣ ಬಹುತೇಕ ಬ್ಯಾಂಕ್ ಗಳು ಬಂದ್ ಆಗಿರಲಿವೆ. ಆದರೆ ಆನ್ ಲೈನ್ ಬ್ಯಾಂಕಿಂಗ್ ಸೇವೆಯಲ್ಲಿ ಯಾವುದೇ ಅಡಚಣೆ ಇರುವುದಿಲ್ಲ.
ಬುಧವಾರ ಕರೆಯಲಾಗಿರುವ ಭಾರತ್ ಬಂದ್ ಗೆ ಮಂಗಳೂರು ಮತ್ತು ಉಡುಪಿಯ ಬಸ್ ಮಾಲಕರ ಬೆಂಬಲವಿಲ್ಲ. ಕರಾವಳಿಯಲ್ಲಿ ಬಸ್ ಗಳು ಎಂದಿನಂತೆ ಸಂಚರಿಸುತ್ತದೆ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷರಾಜವರ್ಮ ಬಲ್ಲಾಳ್ ಮತ್ತು ಉಡುಪಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಹೇಳಿಕೆ ನೀಡಿದ್ದಾರೆ