“ಬಾಂಬ್ ಇಟ್ಟವ ತುಳು ಮಾತನಾಡುತ್ತಿದ್ದ” ಆಟೋ ಚಾಲಕ ಹೇಳಿಕೆ

ರಾಜ್ಯ
Spread the love

ಮಂಗಳೂರು(20ಜನವರಿ/2020): ಮಂಗಳೂರು ಬಾಂಬ್ ಪತ್ತೆ ಪ್ರಕರಣ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರಬಂದಿದೆ. ಶಂಕಿತ ಆರೋಪಿಯನ್ನು ವಿಮಾನ ನಿಲ್ದಾಣದಕ್ಕೆ ಬಾಡಿಗೆ ಬಂದ ಆಟೋ ಚಾಲಕ ಸ್ವತಃ ತಾನೇ ಪೊಲೀಸರ ಎದುರು ಹಾಜರಾಗಿದ್ದಾನೆ.
ಆಟೋದಲ್ಲಿ ಬಂದ ಅಪರಿಚಿತನೋರ್ವ ಟಿಕೆಟ್ ಕೌಂಟರ್ ಬಳಿ ಕಪ್ಪು ಬಣ್ಣದ ಬ್ಯಾಗ್ ಇರಿಸಿ ನಾಪತ್ತೆ ಆಗಿದ್ದ. ಮಂಗಳೂರು ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಗಳ ಫೋಟೋಗಳು ಲಭ್ಯವಾಗಿದ್ದು, ಕ್ಯಾಪ್ ಹಾಕಿರುವ ಒಬ್ಬ ಕೈಯಲ್ಲಿ ಬ್ಯಾಗ್ ಹಿಡಿದಿದ್ದಾನೆ. ಈ ವ್ಯಕ್ತಿ ನಿಲ್ದಾಣದಿಂದ ಹೊರಹೋಗುವುದನ್ನು ಫೋಟೋಗಳು ಸಿಕ್ಕಿದ್ದವು. ಹಾಗೆಯೇ ಶಂಕಿತ ಬಂದಿದ್ದ ಎನ್ನಲಾದ ಆಟೋದ ಎರಡು ಫೋಟೋಗಳು ಸಹ ಲಭಿಸಿತ್ತು.
ಈ ಫೋಟೋಗಳಲ್ಲಿ ಆರೋಪಿ ವಿಮಾನ ನಿಲ್ದಾಣದಕ್ಕೆ ಆಟೋದಲ್ಲಿ ಬಂದ ಫೋಟೋ ಕೂಡ ಲಭಿಸಿತ್ತು. ಸುದ್ದಿ ತಿಳಿದ ಆಟೋದ ಚಾಲಕ ಪೊಲೀಸ್ ಠಾಣೆಗೆ ಬಂದು ಸ್ವತಃ ಹಾಜರಾಗಿದ್ದು, ಶಂಕಿತ ಆರೋಪಿಯ ಬಗ್ಗೆ ಮಾಹಿತಿ ನೀಡಿದ್ದಾನೆ. ನನ್ನ ಆಟೋದಲ್ಲಿ ಬಂದ ಶಂಕಿತ ಆರೋಪಿ ತುಳುನಲ್ಲಿ ಮಾತನಾಡುತ್ತಿದ್ದ. ಜೊತೆಗೆ ನನಗೆ 400 ರೂ. ಬಾಡಿಗೆ ಕೊಟ್ಟು ಪಂಪ್‍ವೆಲ್ ಬಳಿ ಇಳಿದುಕೊಂಡು ಹೋದ ಎಂದು ಹೇಳಿದ್ದಾನೆ. ಆಟೋ ಚಾಲಕನ ಮಾಹಿತಿ ಮೇರೆಗೆ ಮೂರು ವಿಶೇಷ ತಂಡಗಳನ್ನು ರಚಿಸಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ