ಮೂಡುಬಿದಿರೆ ಕಂಬಳ: ಯಡಿಯೂರಪ್ಪರಿಂದ ಅಬ್ಬಕ್ಕ ಪ್ರತಿಮೆ ಲೋಕಾರ್ಪಣೆ

ರಾಜ್ಯ
Spread the love

ಮೂಡುಬಿದಿರೆ(ಡಿ 25/2019): ಕಂಬಳವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಕಂಬಳ ಬಹಳ ವೈಶಿಷ್ಟ್ಯವಾದಂತದ್ದು, ಅಂತಹ ಕಂಬಳ ಸಮಾರಂಭವನ್ನು ಉದ್ಘಾಟನೆ ಮಾಡುವ ಪುಣ್ಯ ಕೆಲಸ ನನಗೆ ದೊರಕಿದೆ. ಈ ಭಾಗದಲ್ಲಿ ಕಂಬಳಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಬಹಳ ದೊಡ್ಡ ಮಟ್ಟದಲ್ಲಿ ಕಂಬಳ ನಡೆಸಲಾಗುತ್ತದೆ. ಕಂಬಳಕ್ಕೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಬೇಕು” ಎಂದು ತಿಳಿಸಿದ್ದಾರೆ.
ರಾಣಿ ಅಬ್ಬಕ್ಕ ಪುತ್ಥಳಿಯನ್ನು ಉದ್ಘಾಟಿಸಿದ ಅವರು, “ಕಂಬಳವನ್ನು ಉದ್ಘಾಟಿಸುವ ಹಾಗೂ ರಾಣಿ ಅಬ್ಬಕ್ಕ ಪುತ್ಥಳಿ ಅನಾವರಣ ಮಾಡಲು ಜನರು ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ, ಇದು ನನ್ನ ಪುಣ್ಯ” ಎಂದರು.
ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಿರ್ಮಾಣಗೊಂಡ 18ಅಡಿ ಎತ್ತರದ ಮೂಡುಬಿದಿರೆಯ ಮಣ್ಣಿನ ಮಗಳು ವೀರ ರಾಣಿ ಅಬ್ಬಕ್ಕ ಪ್ರತಿಮೆಯನ್ನು ಲೋಕಾರ್ಪಣ ಮಾಡಿ ಮಾತನಾಡಿದರು.
ತುಳುನಾಡಿನ ಮಂದಿ ಕಂಬಳ ಕ್ರೀಡೆಯನ್ನು ಉಳಿಸಿ ಬೆಳೆಸುತ್ತಿದ್ದೀರಿ ಎಂದು ಪ್ರಶಂಸಿಸಿದ ಮುಖ್ಯಮಂತ್ರಿಗಳು, ಸಂಸ್ಕøತಿ ಪ್ರೀತಿ ಹೀಗೆ ಉಳಿಯುವಂತಾಗಲಿ ಎಂದು ಆಶಿಸಿದರು.
ಮೂಡುಬಿದಿರೆ ನೂತನ ತಾಲೂಕಾಗಿ ಘೋಷಣೆಯಾದ ಬಳಿಕ ಮೊಟ್ಟಮೊದಲ ಬಾರಿಗೆ ತಾಲೂಕಿಗೆ ಆಗಮಿಸಿದ ಮುಖ್ಯಮಂತ್ರಿಗಳು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸರ್ವ ರೀತಿಯ ಸಹಕಾರವನ್ನು ನೀಡುವುದಾಗಿ ಘೋಷಿಸಿದರು. ಜೈನಕಾಶಿ, ವಿದ್ಯಾಕಾಶಿ ಮೂಡುಬಿದಿರೆಯನ್ನು ಮಾದರೀ ತಾಲೂಕಾಗಿ ಅಭಿವೃದ್ಧಿ ಪಡಿಸುವ ಕನಸಿದೆ ಎಂದರು.
ಕಂಬಳ ಕೋಣದ ಮಾಲೀಕರು ಕಂಬಳ ಕೋಣಗಳನ್ನು ಮಕ್ಕಳಂತೆ ಸಾಕುತ್ತಿದ್ದಾರೆ ಎಂದು ಪ್ರಶಂಸಿಸಿದ ನಾಡದೊರೆ ಬಿ.ಎಸ್.ಯಡಿಯೂರಪ್ಪ, ಸಾಂಪ್ರದಾಯಿಕ ಕಂಬಳವನ್ನು ಉಳಿಸಿ ಬೆಳೆಸುವುದು ನಿಶ್ಚಿತ ಎಂದು ಘೋಷಿಸಿದರು.
ತುಳುನಾಡಿನ ಮಂದಿಗಳು ಕ್ರಿಯಾಶೀಲರು, ಶ್ರಮ ಜೀವಿಗಳು ವಿಶ್ವದೆಲ್ಲೆಡೆ ತಮ್ಮ ಅಗಾಧ ಪ್ರತಿಭೆಗಳಿಂದ ಪ್ರಸಿದ್ಧಿ ಪಡೆದವರು ಎಂದು ಹೇಳಿದರು.
ಅಬ್ಬಕ್ಕನ ಜೀವನ ನಮಗೆ ಮಾದರಿ,ವಸಾಹತು ಶಾಹಿಗಳ ವಿರುದ್ಧ ಹೋರಾಟ ಮಾಡಿದ ಪ್ರಥಮ ಮಹಿಳೆ ವೀರವನಿತೆ ಅಬ್ಬಕ್ಕಳ ಜೀವನ ಮಾದರೀ ಎಂದು ಪ್ರಶಂಸಿಸಿದ ಮುಖ್ಯಮಂತ್ರಿಗಳು ಮುಂದಿನ ಪೀಳಿಗೆಗೆ ಇವರ ಜೀವನ ಲಭಿಸುವಂತಾಗಬೇಕಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ, ಪಠ್ಯಗಳಲ್ಲಿ ಇದು ಬರುವಂತಾಗಲಿ ಎಂದರು. ಮಹಿಳೆ ಸಬಲೆ ಎಂದು ಸಾರಿದ ಹಿರಿಮೆ ಅಬ್ಬಕ್ಕ ರಾಣಿಗಿದೆ ಎಂದರು