ಕಾರ್ ಗಾಜು ಒಡೆದು ಲಕ್ಷಾಂತರ ರೂ. ದರೋಡೆ

General ಅಂತಾರಾಷ್ಟ್ರೀಯ ಅರೋಗ್ಯ ಇತರೆ ಉಡುಪಿ ಉದ್ಯೋಗ ಕರಾವಳಿ ಕಾಸರಗೋಡು ಕ್ರೀಡೆ ಬಂಟ್ವಾಳ ಮಂಗಳೂರು ಮಹಿಳಾ ವಿಭಾಗ ರಾಜಕೀಯ ರಾಜ್ಯ ರಾಷ್ಟ್ರೀಯ ಲೇಖನ ವಾಣಿಜ್ಯ ವಿಜ್ಞಾನ ತಂತ್ರಜ್ಞಾನ ಸಿನಿಮಾ ಸ್ಥಳೀಯ
Spread the love

ಮಂಗಳೂರು(ಡಿ13): ಲಾಕ್ ಮಾಡಿ ನಿಲ್ಲಿಸಿದ್ದ ಕಾರಿನ ಹಿಂಬದಿ ಸೀಟಿನ ಕಿಟಕಿ ಗಾಜು ಪುಡಿಗೈದು ಕಾರಿನೊಳಗಿಡಲಾಗಿದ್ದ 15 ಲಕ್ಷ ಹಣವನ್ನು ದರೋಡೆ ನಡೆದ ಘಟನೆ ನಗರದ ಚಿಲಂಬಿಯಲ್ಲಿ ಡಿ.13 ರ ಶುಕ್ರವಾರ ನಡೆದಿದೆ. ಹಣದ ವಾರೀಸುದಾರರು ಹಣದ ಸೌತ್ ಇಂಡಿಯಾ ಬ್ಯಾಂಕ್ ಬಂದಿದ್ದರು ಎಂದು ತಿಳಿದುಬಂದಿದೆ. ಕೆ ಎ 03ಎಂವೈ 4390 ನೋಂದಣಿಯ ಕಪ್ಪು ಬಣ್ಣದ ಹುಂಡೈ ಐ 10 ಕಾರಿನಲ್ಲಿ ಕಾರಿನಲ್ಲಿ ಹಣವಿರಿಸಲಾಗಿತ್ತು ಎಂದು ತಿಳಿದುಬಂದಿದ್ದು, ಬೈಕಿನಲ್ಲಿ ಬಂದ ಹೆಲ್ಮಟ್ ಧರಿಸಿದ್ದ ಇಬ್ಬರು ಕಾರಿನ ಗಾಜು ಪುಡಿಗೈದು ದರೋಡೆ ನಡೆಸಿದ್ದಾರೆ. ಈ ಕೃತ್ಯ ಸಿ.ಸಿ ಟಿವಿಯಲ್ಲಿ ಸೆರೆಯಾಗಿದ್ದು ಬರ್ಕೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ. ಹಣ ಹಾಗೂ ಕಾರಿನ ವಾರೀಸುದಾರರ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ